Advertisement

ಜನ್ಮವಾರದ ಗುಣಲಕ್ಷಣಗಳು

ಜನ್ಮವಾರದ ಗುಣಲಕ್ಷಣಗಳು

ಕೆಲವರಿಗೆ ಅವರ ಹುಟ್ಟಿದ ದಿನಾಂಕ ಮತ್ತು ವರ್ಷ ತಿಳಿದಿರುವುದಿಲ್ಲ ಆದ್ದರಿಂದ ಜನ್ಮ ಜಾತಕ ಇರುವುದಿಲ್ಲ. ಆದರೆ ಅವರು ಯಾವ ದಿನ ಹುಟ್ಟಿದ್ದಾರೆ ಎಂಬುದು ತಿಳಿದಿರುತ್ತದೆ ಅದರ ಪ್ರಕಾರ ಅವರು ಹುಟ್ಟಿದ ವಾರ ಎಂಬುದೆಂದು ತಿಳಿದು ಗುಣ ಲಕ್ಷಣಗಳನ್ನು ಮತ್ತು ಫಲಗಳನ್ನು ತಿಳಿದುಕೊಳ್ಳಬಹುದು

ನಿಮ್ಮ ಬಳಿ ಜಾತಕ ಅಥವಾ ಹುಟ್ಟಿದ ದಿನಾಂಕವಿಲ್ಲವೆಂದರೆ ಗುರೂಜಿಯವರು ನಿಮ್ಮ ಹಸ್ತ ರೇಖೆ ಮುಖಲಕ್ಷಣವನ್ನು ನೋಡಿ ಭವಿಷ್ಯ ಹೇಳುತ್ತಾರೆ.

1. ರವಿವಾರ ಅಥವಾ ಭಾನುವಾರ ಜನಿಸಿದವರ ಗುಣಲಕ್ಷಣಗಳು
ರವಿವಾರ ಜನಿಸಿದವರು ಸಾಮಾನ್ಯ ಎತ್ತರವುಳ್ಳ ಸುಂದರ ಆಕರ್ಷಿಕ ಶರೀರ ಹೊಂದಿರುತ್ತಾರೆ. ಗುಂಡಾದ ಚಿಕ್ಕ ತಲೆಯವರು ಬಿಳಿ ಬಣ್ಣದವರು ಸಾಹಸಿಗಳು ದಾನಿಗಳು ವೀರರು ಸ್ವಾಭಿಮಾನಿಗಳು ಆಗಿರುತ್ತಾರೆ. ಇವರಿಗೆ ಧರ್ಮ ಕರ್ಮಗಳಲ್ಲಿ ವಿಶೇಷ ಆಸಕ್ತಿ ಇರುತ್ತದೆ ಸ್ವಲ್ಪ ಹಠವಾದಿಗಳು ಇರುತ್ತಾರೆ.

ಸುಳ್ಳು ಮೋಸವನ್ನು ದ್ವೇಷಿಸುವವರು ಸಹಾಯ ಅಪೇಕ್ಷಿಸಿ, ಬೇರೆಯವರ ಬಳಿಗೆ ಎಂದು ಹೋಗದಿರುವವರು.

ದೈವ ನಂಬಿಕೆ ಪ್ರಕೃತಿ ಪ್ರೇಮಿಗಳು ಏಕಾಂತ ವಾಸ ಪ್ರಿಯರು ಆದರೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ ಆದರೂ ಸುಖಿಗಳು ಜೊತೆಯಲ್ಲಿ ಇರುವವರನ್ನು ಬೇಗ ನಂಬುತ್ತಾರೆ ಅವರಿಂದ ಮೋಸ ಹೋಗುತ್ತಾರೆ

2. ಸೋಮವಾರ ಜನಿಸಿದವರ ಗುಣಲಕ್ಷಣಗಳು
ಕಡಿಮೆ ಮಾತನಾಡುತ್ತಾರೆ ದಯೆ ಮಮತೆ ಮೋಹ ಪರೋಪಕಾರಿ ಶಕ್ತಿ ಮತ್ತು ಸಾತ್ವಿಕ ಗುಣಗಳಿಂದ ಕೂಡಿರುತ್ತಾರೆ. ಇವರಿಗೆ ದೇವರಲ್ಲಿ ಗುರು ಹಿರಿಯರಲ್ಲಿ ಮತ್ತು ಆತಿಥ್ಯಗಳಲ್ಲಿ ಪೂಜ್ಯ ಭಾವನೆ ಇರುತ್ತದೆ. ಇವರು ಸಾರ್ವಜನಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ.

ಭಾಗ್ಯಶಾಲಿಗಳಾದ ಇವರು ಶ್ರೇಷ್ಠ ತಾಯಿ, ಭಾಗ್ಯವಂತ ಪತ್ನಿ ಒಳ್ಳೆಯ ಮಕ್ಕಳಾಗಿರುತ್ತಾರೆ. ಆದರೆ ಇವರು ಪ್ರೀತಿ ಪ್ರಣಯಗಳಲ್ಲಿ ಸಫಲರಾಗುವುದಿಲ್ಲ ಸಫಲರಾಗುವುದಿಲ್ಲ ಹಾಗಾಗೆ ಅವಮಾನಿತರಾಗುತ್ತಾರೆ.

ಅತಿ ಬುದ್ಧಿಯವರಾದ ಇವರು ಶೃಂಗಾರ ಮನೋರಂಜನೆಗೆಂದು ಸಂಪಾದನೆ ಬಹುಬಾಗ ಖರ್ಚು ಮಾಡುತ್ತಾರೆ. ಆವೇಶದಿಂದ ಕಾರ್ಯ ಪ್ರಾರಂಭಿಸಿ ತೊಂದರೆ ಬಂದರೆ ಅದನ್ನು ಕೈ ಬಿಟ್ಟು ಬೇರೆ ಕಾರ್ಯದಲ್ಲಿ ತೊಡಗುತ್ತಾರೆ.

3. ಮಂಗಳವಾರ ಜನಿಸಿದವರ ಗುಣಲಕ್ಷಣಗಳು
ಮಂಗಳವಾರ ಜನಿಸಿದವರು ಧೈರ್ಯ ಮತ್ತು ಸಾಹಸದವರು. ನೋಡುವುದಕ್ಕೆ ದಪ್ಪಗೆ, ಉಬ್ಬಿದ ಕೆನ್ನೆ , ಗoಗುರು ಕೂದಲು, ಕಪ್ಪು ಬಣ್ಣ ಹೊಂದಿ ಸುಂದರ ಮತ್ತು ವ್ಯಕ್ತಿತ್ವದಲ್ಲಿ ವಿಶೇಷ ಆಕರ್ಷಣೆ ಹೊಂದಿರುತ್ತಾರೆ.

ದೈಹಿಕ ದೃಷ್ಟಿಯಿಂದ ನಿಶಕ್ತಾರಾದರೂ ಮಾನಸಿಕ ಶಕ್ತಿಯಲ್ಲಿ ಬಲಾಡ್ಯರು. ಯಾವ ಕಾರ್ಯದಲ್ಲಿಯೂ ಸಾಹಸದಿಂದ ಮುನ್ನುಗುವವರು. ನಿರಂತರ ಹೊಸ ಹೊಸ ಕಲ್ಪನೆಗಳನ್ನು ಹಾಕುವ ಇವರು ಸಫಲರಾಗುತ್ತಾರೆ. ಚಿಂತೆಯನ್ನು ಮಾಡದ ಇವರು ಯುದ್ಧ ಹಾಗೂ ಸಂಘರ್ಷ ಪ್ರಿಯರು.

ನುಡಿದಂತೆ ನಡೆಯುತ್ತಾರೆ ಇವರು ಧೀರ, ವೀರ, ಹಠ, ಗಂಭೀರ, ನಿಶ್ಚಲ ಮತ್ತು ಸ್ಪಷ್ಟ ಜೀವನ ಬದುಕುವ ಇವರು ಸ್ವತಂತ್ರ ಮತ್ತು ಏಕಾಂತವನ್ನು ಬಯಸುತ್ತಾರೆ.

ಇವರು ಯಾರಿಗೆ ಸಹಾಯ ಮಾಡುತ್ತಾರೋ ಅವರಿಂದಲೇ ತೊಂದರೆ ಮತ್ತು ನೋವನ್ನು ಅನುಭವಿಸುತ್ತಾರೆ.

4. ಬುಧವಾರ ಜನಿಸಿದವರ ಗುಣಲಕ್ಷಣಗಳು
ಬುಧವಾರ ಜನಿಸಿದವರು ಆಕಾರದಲ್ಲಿ ಸಾಧಾರಣ ಎತ್ತರವಾಗಿರುತ್ತಾರೆ. ಭುಜಗಳು ಕೈಗಳು ಬಲಿಷ್ಠ ವಾಗಿಯೂ ನೀಳವಾಗಿಯೂ ಇರುವವು. ಇವರ ಹಣೆ ಚಿಕ್ಕದಾಗಿ ತೀಕ್ಷ್ಣವಾದ ಕಣ್ಣುಗಳು ಇರುವವು. ಇತರರು ಮೆಚ್ಚುವಂತೆ ತೀಕ್ಷ್ಣವಾಗಿ ಚಮತ್ಕಾರಿಕವಾಗಿ ಮಾತನಾಡಬಲ್ಲ ಚಾತುರ್ಯ ಪಡೆದಿರುತ್ತಾರೆ.

ಇತರರ ಸಹಾಯವನ್ನು ಅಪೇಕ್ಷಿಸದೆ ಸ್ವತಃ ತಾವೇ ಮುಂದುವರಿಯುತ್ತಾರೆ, ಪ್ರತಿ ದಿನ ಹೊಸ ಹೊಸ ಯೋಜನೆಗಳನ್ನು ಮಾಡುತ್ತಿರುತ್ತಾರೆ. ಕಲೆ, ಜ್ಞಾನ, ವ್ಯವಸಾಯ, ಭೌತಿಕ ಕ್ಷೇತ್ರಗಳಲ್ಲಿ ಸಫಲತ ಪಡೆಯುತ್ತಾರೆ, ವಸ್ತ್ರ ಹಾಗೂ ಅಲಂಕಾರ ಪ್ರಿಯರು, ಅತಿಯಾದ ತರ್ಕ ಮತ್ತು ಊಹೆ ಮಾಡುವವರಾಗಿರುತ್ತಾರೆ.

ಒಮ್ಮೊಮ್ಮೆ ಎಲ್ಲಾ ತಿಳಿದು ತಿಳಿಯದಂತೆ ಬುದ್ಧಿ ಹೀನರಂತೆ ವರ್ತಿಸಿ ಹಾಳಾಗುತ್ತಾರೆ . ಇತರ ಮಾತುಗಳನ್ನು ತಪ್ಪು ಹುಡುಕುತ್ತಾರೆ ಸದಾ ಚಿಂತೆಯಿಂದ ಕೂಡಿರುತ್ತಾರೆ ಬೇರೆಯವರನ್ನು ನಿಂದಿಸುವುದು ಇವರ ಅಭ್ಯಾಸವಾಗಿರುತ್ತದೆ ಆದರೆ ಇವರು ನಿರಂತರ ಶ್ರಮಿಕರು ಆಗಿರುತ್ತಾರೆ

5. ಗುರುವಾರ ಜನಿಸಿದವರ ಗುಣಲಕ್ಷಣಗಳು
ಗುರುವಾರ ಜನಿಸಿದವರು ಆರೋಗ್ಯವಂತರು ದೀರ್ಘಾಯುಷಿಗಳು ಮತ್ತು ಕೆಂಪುವರ್ಣದವರಾಗಿರುತ್ತಾರೆ. ಆಕರ್ಷಕ ವ್ಯಕ್ತಿತ್ವ ಸುಂದರ ನೇತ್ರ ಅಗಲವಾದ ಹಣೆ ಹೊಂದಿರುತ್ತಾರೆ.

ಪ್ರಾಮಾಣಿಕರು ವಿದ್ವಾಂಸರು ಆಶಾವಾದಿಗಳು ಪರಿಸರ ಪ್ರೇಮಿಗಳು ದಯಾಶಾಲಿಗಳು ಜನರೊಡನೆ ಬೆರೆಯುವವರು, ಪರೋಪಕಾರಿಗಳು, ದಾನಶೀಲರು, ಒಳ್ಳೆಯ ವ್ಯವಸ್ಥಾಪಕರು ಆಗಿರುತ್ತಾರೆ. ಇವರು ಸುಳ್ಳು ಹೇಳುವುದನ್ನು ಮೋಸ ಮಾಡುವುದನ್ನು ದ್ವೇಷಿಸುತ್ತಾರೆ, ಇವರಿಗೆ ಮಿತ್ರರು ಕಡಿಮೆ ಇರುತ್ತಾರೆ, ಕಷ್ಟದಲ್ಲಿರುವ ಮಿತ್ರರಿಗೆ ಸಹಾಯ ಮಾಡುತ್ತಾರೆ, ಆದರೆ ಅತಿಯಾದ ಊಹೆ ಚಿಂತೆ ಮಾಡುವವರು ಆಗಿರುತ್ತಾರೆ, ಗೃಹಸ್ಥ ಜೀವನದಲ್ಲಿ ಹೆಚ್ಚು ಸಫಲರಾಗಿರುವುದಿಲ್ಲ.

ಇವರ ಜೀವನದಲ್ಲಿ ತೊಂದರೆ ಕಷ್ಟಗಳು ಉಂಟಾದರೆ ನಿಧಾನವಾಗಿ ಪರಿಹಾರವಾಗುತ್ತದೆ, ಇವರಿಗೆ ಜೀವನದಲ್ಲಿ ಅನೇಕ ಬಾರಿ ಧನ ಲಾಭ ಉಂಟಾಗುವುದು, ಇವರು ಲೇಖಕರಾಗಿ ಶಾಸ್ತ್ರ ಹೇಳುವವರಾಗಿ ಹಣ ಸಂಪಾದಿಸುತ್ತಾರೆ.

6.ಶುಕ್ರವಾರ ಜನಿಸಿದವರ ಗುಣಲಕ್ಷಣಗಳು
ಶುಕ್ರವಾರ ಜನಿಸಿದವರು ಅತ್ಯಂತ ಭಾಗ್ಯಶಾಲಿಗಳು, ಸುಂದರ ಸಾಧಾರಣ ಎತ್ತರದವರು, ನೀಲ ವರ್ಣ ನೇತ್ರದವರು, ಸದಾ ಸ್ವಚ್ಛತೆಯನ್ನು ಬಯಸುವವರು ಅನೇಕ ವಿಧವಾದ ವಸ್ತ್ರ ಧರಿಸುವಲ್ಲಿ ಪ್ರವೀಣರು, ಸಾಹಿತ್ಯ ಸಂಗೀತದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುತ್ತಾರೆ, ಪ್ರತ್ಯುಪ್ಕಾರ ಬಯಸದೆ ಕಾರ್ಯ ಮಾಡುತ್ತಾರ. ದಾನ ಕೊಡುವುದರಲ್ಲಿ ವಿಶೇಷ ಆನಂದ, ಇವರಿಗೆ ತಮ್ಮ ಸ್ವಾರ್ಥಕ್ಕಾಗಿ ಏನಾದರೂ ಮಾಡಲು ಸಿದ್ದರು, ಇವರು ಪ್ರಕೃತಿ,ಸಂಗೀತ ಪ್ರಿಯರು.

ಇವರ ದಾಂಪತ್ಯ ಜೀವನ ಅರ್ಧ ಭಾಗ ಸುಖಮಯವಾಗಿರುತ್ತದೆ, ಇನ್ನು ಅರ್ಧ ಭಾಗ ಸುಖ ಇರುವುದಿಲ್ಲ, ಸಾಮಾನ್ಯವಾಗಿ ಇವರು ಶ್ರೀಮಂತರು ಆದರೆ ಆರೋಗ್ಯ ಸರಿ ಇರುವುದಿಲ್ಲ, ಮೈಕೈ ನೋವು, ನರಗಳ ದುರ್ಬಲತೆ ಕಾಡುತ್ತಿರುತ್ತದೆ. ಪ್ರೀತಿ ಪ್ರೇಮದಲ್ಲಿ ಸಿಲುಕಿ ಅನೇಕ ಬಾರಿ ಮೋಸ ಹೋಗುತ್ತಾರೆ, ಹಣಕಾಸಿನ ಮೋಹ ಉಳ್ಳವರು ಆಗಿರುತ್ತಾರೆ ಆದರೆ ವ್ಯಕ್ತಿತ್ವದಲ್ಲಿ ಅತ್ಯಂತ ಸುಂದರವೂ ಮತ್ತು ಆಕರ್ಷಕವಾಗಿರುತ್ತಾರೆ.

7.ಶನಿವಾರ ಜನಿಸಿದವರ ಗುಣಲಕ್ಷಣಗಳು
ಶನಿವಾರ ಜನಿಸಿದವರ ತಲೆ ಕೂದಲು ದಟ್ಟವಾಗಿ, ವಿಶಾಲವಾದ ಭುಜಗಳು, ಅಗಲವಾದ ಉಬ್ಬುಗಳು, ಸಣ್ಣ ಕಾಲುಗಳು, ದೊಡ್ಡ ಕಿವಿಗಳು ಹೊಂದಿರುತ್ತಾರೆ.

ಧರ್ಮಕ್ಕೆ ಹೆದರದವರು ಮಹಾಪ್ರೇಮಿಗಳು, ಹಠವಾದಿಗಳು, ಹಣ ಸಂಪಾದಿಸುವುದರಲ್ಲಿ ದಕ್ಷರು, ಗುಪ್ತ ವಿದ್ಯೆಪ್ರಿಯರು, ಕಳ್ಳರು ಮತ್ತು ಕೊಲೆಗಾರರ ಮಟ್ಟಕ್ಕೂ ಇವರಿರುತ್ತಾರೆ. ನಿಷ್ಠುರತೆಯ ಕಾರಣದಿಂದಾಗಿ ಉದ್ದಟರಾಗಿ ಪರಾಧಿಗಳಾಗಬಹುದು.

ಮಿತ್ರರನ್ನು ದ್ವೇಷಿಗಳನ್ನು ಎಂದಿಗೂ ಮರೆಯುವುದಿಲ್ಲ, ಹೊಗಳಿಕೆಗೆ ಮರುಳಾಗಿ ಯಾವುದೇ ಕೆಲಸ ಮಾಡಲು ಸಿದ್ದರು, ಇವರ ಆರ್ಥಿಕ ಪರಿಸ್ಥಿತಿ ಏರುಪೇರಾಗಿರುವುದು. ಮಧ್ಯಸ್ಥಿಕೆ , ಸಾಕ್ಷಿ, ಮುಂದಾಳತನದಿಂದ ತೊಂದರೆ ಹಾನಿ ಅನುಭವಿಸುತ್ತಾರೆ.

ಕನ್ನಡ ಜ್ಯೋತಿಷಿಗಳು

ಪ್ರೀತಿ ಸಂಬಂದಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ. ಪ್ರೇಮ ವಿವಾಹ , ಮದುವೆ ತೊಂದರೆ , ದಾಂಪತ್ಯ ಕಿರಿಕಿರಿ, ಆಸ್ತಿ ಮಾರಾಟ (ಖರೀದಿ), ವಿದೇಶ ಪ್ರಯಾಣ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ ಇತ್ಯಾದಿ ಗುಪ್ತ ಸಮಸ್ಯೆಗಳಿಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ನಿಮ್ಮ ಜೀವನದ ಯಾವುದೇ ಘೋರ ನಿಗೂಢ ಸಮಸ್ಯೆಗಳಿದ್ದರೂ ಗುರುಜಿಯವರಿಂದ ಶಾಶ್ವತ ಪರಿಹಾರ

ತ್ವರಿತ ಲಿಂಕ್‌ಗಳು

gallery